ಯಾಕೋ ಗೊತ್ತಿಲ್ಲ,
ಆ ಕಳೆದು ಹೋದ ದಿನಗಳಲ್ಲಿದ್ದ ಮಜಾ, ಈಗ ಇರುವ ಹಾಗೂ ಬರುವ ದಿನಗಳಲ್ಲಿ ಇಲ್ಲ
I don’t know why,
The joy in those lost days is not there anymore in the present or in the coming days
ಯಾಕೋ ಗೊತ್ತಿಲ್ಲ,
ಶಾಲೆಗೆ ಹೋಗುವಾಗ ಅಮ್ಮ ಮಾಡಿದ ಅವಸರದ ಒಗ್ಗರಣೆ ಅನ್ನದ ಮಜಾ, ಈಗ ಅಚ್ಚುಕಟ್ಟಾಗಿ ಮಾಡಿ ಬಡಿಸುವ ಇಡ್ಲಿ , ದೋಸೆಯಲಿಲ್ಲ
I don’t know why,
The joy that was there in eating the colored rice cooked by by mom in hurry while going to school, is no more in well prepared idli and dosa
ಯಾಕೋ ಗೊತ್ತಿಲ್ಲ,
ಒಂದು ಹನಿ ನೀರೂ ಇಲ್ಲದೆ ದೂರದ ಮೈದಾನದಲ್ಲಿ ದಿನಪೂರ್ತಿ ಆಡಿದ ಕ್ರಿಕೆಟ್ ನಲ್ಲಿದ್ದ ಮಜಾ, ಈಗ ಬಾಟಲಿ ನೀರು , ಕೂಲಿಂಗ್ ಗ್ಲಾಸ್ , ಬಾಳೆಹಣ್ಣು , ತಲೆಗೆ ಟೋಪಿ ಎಲ್ಲಾ ಇದ್ದು ಆಡುವ ಟೆನಿಸ್ನಲ್ಲಿ ಇಲ್ಲ
I don’t know why,
The joy we had playing cricket whole day without thirsting for a drop of water, is no more in the tennis I play now with all amenities
ಯಾಕೋ ಗೊತ್ತಿಲ್ಲ,
ಅಪ್ಪನ ಹತ್ತಿರ ಕಾಡಿ ಬೇಡಿ ಇಸಿದುಕೊಂಡ ಒಂದೆರಡು ರೂಪಾಯಿ ಯಿಂದ ತಿಂದ ಭೇಲ್ ಪುರಿಯ ಮಜಾ, ಈಗ ಐಷಾರಾಮಿ ಹೋಟೆಲಿನಲ್ಲಿ ಕುಂತು ತಿನ್ನುವ ಪಿಜ್ಜಾ ಬರ್ಗರ್ ಗಳಲ್ಲಿ ಇಲ್ಲ
I don’t know why,
The joy that gave when I used to eat 1 Re bhel-puri which was gotten from Dad after a big tantrum, is no more in the luxurious cuisine i eat at
ಯಾಕೋ ಗೊತ್ತಿಲ್ಲ,
ಹೀರೋ ರೇಂಜರ್ ಸೈಕಲ್ ತುಳಿದು ೩-೪ ಕಿಲೋಮೀಟರ್ ದೂರ ಶಾಲೆಗೆ ಹೋದ ಮಜಾ, ಐಷಾರಾಮಿ ಕಾರಿನಲ್ಲಿ ಕುಳಿತು ಊರೂರು ಸುತ್ತುವುದರಲ್ಲಿಲ್ಲ
I don’t know why,
The joy i had in peddling the ranger bicycle for 3-4 kms to school, is not to be seen in the luxurious car I drive to the places
ಯಾಕೋ ಗೊತ್ತಿಲ್ಲ,
ವಾರಕ್ಕೆ ರವಿವಾರ ಒಂದೇ ದಿನ ರಜೆಯನ್ನೇ ಆನಂದಿಸಿದ ಮಜಾ, ಈಗಿರುವ ವಾರಕ್ಕೆ ಎರಡೂವರೆ ದಿನಗಳ ರಜೆಯಲ್ಲಿಲ್ಲ
I don’t know why,
The joy I had in 1 day sunday weekend, isn’t felt in the 2.5 days weekend now
ಯಾಕೋ ಗೊತ್ತಿಲ್ಲ,
ವರ್ಷಕ್ಕೆರಡು ಜೊತೆ ಸಿಗುವ ಬಟ್ಟೆ ಹಾಕಿಕೊಳ್ಳುವುದರ ಮಜಾ, ಈಗ ಮನ ಬಂದಾಗ ಖರೀದಿಸುವ ಬಟ್ಟೆಗಳಲ್ಲಿಲ್ಲ
I don’t know why,
The joy i had getting a pair of shirts and pants per year, isn’t experienced in-spite of being able to buy every weekend now
ಯಾಕೋ ಗೊತ್ತಿಲ್ಲ,
ಹುಟ್ಟು ಜೊತೆಯಲ್ಲೇ ಬೆಳೆದ ಗೆಳೆಯರ ಬೈಗುಳದಲ್ಲಿರುವ ಮಜಾ, ಹೆಂಡತಿ ಬಯ್ಯುವ ಮಾತುಗಳಲ್ಲಿಲ್ಲ
I don’t know why,
The joy i had hearing to the friends scolding me with bad words, is no where to be found in the scoldings my wife gives me on daily basis 😬
ಗುರುರಾಜ ದೇಸಾಯಿ (ವಚನ ಬ್ರಹ್ಮ)


