ಶನಿವಾರ, ಡಿಸೆಂಬರ್ 28, 2024

ಮುಖವಾಡದ ಸಂಬಂಧಗಳು 

-ಶೀಘ್ರವೇ ನಿರೀಕ್ಷಿಸಿ-

 ವ್ಯಕ್ತಿ ಪೂಜೆ 

-ಶೀಘ್ರವೇ ನಿರೀಕ್ಷಿಸಿ-

ಬುಧವಾರ, ಜೂನ್ 5, 2024

ಕನ್ನಡಾಂಬೆಯ ಮಕ್ಕಳು

ಕನ್ನಡಾಂಬೆಯ ಮಕ್ಕಳು ನಾವು 
ಸಾಗರದಾಚೆ ನೆಲೆಸಿಹೆವು ।।
ತವರೂರಿನ ವ್ಯಾಮೋಹವ ತೊರೆಯದೆ ।
ಗೂಡು ಕಟ್ಟಲು ಬಂದಿಹೆವು ।।

ನೆಲ ಜಲ ಕಲೆಯ ಸಿರಿತನಕೆ 
ಬಲವ ಕೊಡುತಲೆ ಸಾಗುವೆವು ।।
ಕನ್ನಡ ನಾಡಿನ ಸಕಲ ವೈಭವವ ।
ಉತ್ತುಂಗಕ್ಕೊಯ್ಯಲು ಶ್ರಮಿಸುವೆವು ।।

ತಾಯ್ನಾಡಿನ ಋಣವನು ಮರೆಯದೆ 
ನವ ಪೀಳಿಗೆಗೆ ಹೇಳುವೆವು ।।
ಸಿರಿಗನ್ನಡ ಭಾಷೆಯ ಕಲಿಸುತ ನಾವು ।
ಕನ್ನಡ ಕಲಿಗಳ ಬೆಳೆಸುವೆವು ।।


ಕನ್ನಡದ ಬಳಕೆಯ ಬೆಳೆಸುವೆವು 
ಸಿರಿಗಂಧದ ಕಂಪನು ಪಸರಿಸುವೆವು 

-
ಗುರುರಾಜ್ - ವಚನ ಬ್ರಹ್ಮ 


ಶುಕ್ರವಾರ, ಏಪ್ರಿಲ್ 12, 2024

ಅಹಂಕಾರಿ ನಾನಲ್ಲ

ಮೇಧಾವಿಗಳ (ಅಹಂಕಾರಿ) ನಡುವೆ ನಮ್ಮದೇನು ಕೆಲಸ

ಅವರ ಸಾಧನೆಗಳ ಮುಂದೆ ನಮ್ಮದೆಲ್ಲ ನೀರಸ

ದವಡೆಗೆ ಮೂಲ, ದೊಡ್ಡವರ ಜೊತೆ ಬಡವನ ವಿರಸ

ಮುಂದುವರೆಯಲಿ ಅವರವರ ಸರಸ

-
ಗುರುರಾಜ್ - ವಚನ ಬ್ರಹ್ಮ