ಮಂಗಳವಾರ, ಡಿಸೆಂಬರ್ 22, 2020

ಓ ಪ್ರೀತಿಯೇ !!!



ಓ ಪ್ರೀತಿಯೇ ನೀನೆಷ್ಟು ಕುರುಡು 

ನೀ ಹುಟ್ಟಲು ಬೇಕು ಜೀವಗಳು ಎರಡು 

ನೀನಿಲ್ಲದೆ ಅವುಗಳ ಬಾಳು ಬರಡು !


ಓ ಪ್ರೀತಿಯೇ ನಿನ್ನಲ್ಲಿ ಕಟ್ಟಳೆಗಳಿಲ್ಲ 

ನಿನಗೆ ಸಲಿಂಗಿ, ದ್ವಿಲಿಂಗಿ ಎಂಬ ಬೇಧವಿಲ್ಲ 

ನೀನಿಲ್ಲದೆ ಈ ಜಗದೊಳು ನಶ್ವರವೆಲ್ಲ !


ಓ ಪ್ರೀತಿಯೇ ನೀನೆಷ್ಟು ಅಗೋಚರ 

ನಿನ್ನ ಅರಿತು ನಡೆದರೆ ಆಚಾರ 

ನಿನ್ನ ಜಗಕೆ ಉಣಬಡಿಸಿದರೆ ಸ್ವರ್ಗ ಎಂಬುದು ನನ್ನ ವಿಚಾರ !


ಓ ಪ್ರೀತಿಯೇ ನೀನೆಷ್ಟು ಜನರಿಗೆ ಸ್ಫೂರ್ತಿ 

ನಿನ್ನ ಇರುವಿಕೆಯಿಂದಲೇ ಅವರ ಜೀವನ ಪೂರ್ತಿ 

ನಿನ್ನ ಎಲ್ಲರೂ ಅಳವಡಿಸಿಕೊಂಡರೆ ಇಡೀ ಮಾನವ ಕುಲಕೇ ಕೀರ್ತಿ !!!


ಪ್ರೀತಿಯಿಂದ,

ಗುರುರಾಜ್



ಶುಕ್ರವಾರ, ಡಿಸೆಂಬರ್ 11, 2020

ಮಾತು ಕೇಳಲಿಲ್ಲ

ಅವ್ವ ಹೇಳಿದಳು ಹೊರಗ ಹೋಗಬ್ಯಾಡ,
ಅಲ್ಲಿ ಅಯ್ತಿ ದೆವ್ವ
ನಾ ಅವಳ ಮಾತು ಕೇಳಲಿಲ್ಲ !

ಶಿಕ್ಷಕರು ಹೇಳಿದರು ಪಾಠದ ಮಧ್ಯ ಮಾತಾಡ್ಬ್ಯಾಡ
ನಿನಗ ಅಯ್ತಿ ಶಿಕ್ಷೆ
ನಾ ಅವರ ಮಾತು ಕೇಳಲಿಲ್ಲ !

ಸ್ವಾಮಿಗೋಳು ಹೇಳಿದರು ಅತೀ ಆಸೆ ಮಾಡ್ಬ್ಯಾಡ
ನಿಂದೇನು ಇಲ್ಲ ಇಲ್ಲಿ ಸ್ವಾಮ್ಯ
ನಾ ಅವರ ಮಾತು ಕೇಳಲಿಲ್ಲ !

ಪರಿಸರ ಹೇಳಿತು ನನ್ನನ್ನ ಹಾಳು ಮಾಡಬೇಡ
ಅಪಾಯದ ಮೂಲವೇ ನಿನ್ನ ಅವಸರ
ನಾ ಅದರ ಮಾತು ಕೇಳಲಿಲ್ಲ !

ನಾವು ಹೇಳಿದೆವು ನೀ ಮನುಕುಲಕ್ಕೆ ಅಂಟಬೇಡ
ಇದರಿಂದ ಆಗುತ್ತಿದೆ ಸಾವು-ನೋವು 
ಕೊರೋನಾ ನಮ್ಮ ಮಾತು ಕೇಳಲಿಲ್ಲ  !!!

- ಗುರುರಾಜ್ ದೇಸಾಯಿ 

ಬುಧವಾರ, ಡಿಸೆಂಬರ್ 9, 2020

ಆಯಿತು ವಯಸ್ಸು ಮೂವತ್ತೇಳು!

ಮನಸ್ಸು ಹೇಳಿತು ಏಳು, ಎದ್ದೇಳು !

ಮಾಡಿದ್ದಾಯಿತು ಗಣಕ ಯಂತ್ರ ಕುಟ್ಟಿ ಹಾಳು !

ಹಚ್ಚಿಕೋ ಕನ್ನಡ ತಾಯಿ ಸೇವೆ ಮಾಡುವ ಗೀಳು !!!
















-
ಗುರುರಾಜ್ ದೇಸಾಯಿ 

ತುಂಬಾ ಕಲಿಯುವುದಿದೆ

ಬರೆಯಲು ಕುಂತೆ ಬುಕ್ಕು (book) ನಿನಗೆಷ್ಟು ಸೊಕ್ಕು ? ಕಲಿತಿರುವುದೇ ಎರಡಕ್ಷರ, ನೀನಿನ್ನೂ ತುಂಬಾ ಕಲಿಯುವುದಿದೆ ಕನ್ನಡ ಪದಗಳ ಗೋದಾಮು ಹೊಕ್ಕು ಎಂದಳು ನನ್ನ ಕನ್ನಡ ತಾಯಿ ನಕ್ಕು !!!


-
ಗುರುರಾಜ ದೇಸಾಯಿ

ಮಂಗಳವಾರ, ಡಿಸೆಂಬರ್ 8, 2020

ನಾ ಎಲ್ಲಿ ಹೋದೆ...










ಪ್ರೀತಿಯ ಪಾಶ ಹೆಣೆದಳು !
ಮಿಂದು ಹೋದೆ !!

ಮಾತಿನ ಹಾರ ಕಟ್ಟಿದಳು !
ನಂಬಿ ಹೋದೆ !!

ಬದುಕಿನ ಆಸೆ ಹುಟ್ಟಿಸಿದಳು !
ಕೊಂಡು ಹೋದೆ !!

ಸುಳ್ಳಿನ ಸರಪಳಿಯಿಂದ ಕಟ್ಟಿಹಾಕಿದಳು !
ತಿಳಿಯದೆ ಹೋದೆ !!

ನಿರ್ಲಕ್ಷೆಯ ಗೋಡೆ ಕಟ್ಟಿದಳು !
ಬೆಂದು ಹೋದೆ !! 

ಕೈಗೆ ಸಿಗದೇ ಸತಾಯಿಸಿದಳು !
ನೊಂದು ಹೋದೆ !!

ನನ್ನ ಭಾವನೆಗಳ ಹಣಿದಳು !
ಕುಗ್ಗಿ ಹೋದೆ !!

ಹೃದಯ ವೇದನೆಯ ಅರಿಯದಾದಳು !
ಸೋತು ಹೋದೆ !!

ಘಾಯದ ಮೇಲೆ ಬರೆಯೆಳೆದಳು !
ಸತ್ತು ಹೋದೆ !!!

-
ಗುರುರಾಜ ದೇಸಾಯಿ

ಸೋಮವಾರ, ಡಿಸೆಂಬರ್ 7, 2020

ಬಯಕೆ






ನಿನ್ನ ಕಂಗಳ ಅಂಗಳದಲಿ
ಆಡುವ ಬಯಕೆ ನನದು,
ಅವಕಾಶ ಕೊಡುವೆಯಾ ?

ನಿನ್ನ ಕಣ್ಣ ರೆಪ್ಪೆಯ ತಪ್ಪಲಿನಲಿ
ದಣಿವಾರಿಸಿಕೊಳ್ಳುವ ಬಯಕೆ ನನದು,
ಅವಕಾಶ ಕೊಡುವೆಯಾ ?

ನಿನ್ನ ಕಣ್ಣ ಕಾಡಿಗೆಯಲಿ
ಅವಿತುಕೊಳ್ಳುವ ಬಯಕೆ ನನದು,
ಅವಕಾಶ ಕೊಡುವೆಯಾ ?

ನಿನ್ನ ಕಣ್ಣಾಲಿಗಳಲಿ
ಈಜಬೇಕೆಂಬ ಬಯಕೆ ನನದು,
ಅವಕಾಶ ಕೊಡುವೆಯಾ ?

ನಿನ್ನ ಕಣ್ಗಾವಲಿನಲಿ
ಮಣ್ಣಾಗಬೇಕೆಂಬ ಬಯಕೆ ನನದು,
ಅವಕಾಶ.. ಕೊಡುವೆಯಾ.. 

- ಗುರುರಾಜ್