ಭಾನುವಾರ, ಡಿಸೆಂಬರ್ 29, 2019

ವಚನಭ್ರಹ್ಮ


ವಚನ ಸಾರುವಷ್ಟು ಹಿರಿಯ ನಾನಲ್ಲ !

ವಚನ ಹುಟ್ಟುಹಾಕುವಷ್ಟು ಜ್ಞಾನಿಯೂ ನಾನಲ್ಲ !

ನಾನೊಬ್ಬ ಸಾಮಾನ್ಯರಲ್ಲಿ ಸಾಮಾನ್ಯ ... ಹೆಸರು ವಚನಭ್ರಹ್ಮ !!

-
ಗುರುರಾಜ ದೇಸಾಯಿ

ಮೈಯ್ಯ ಬಣ್ಣ














ಅಣ್ಣ, ನಿನ್ನದಲ್ಲ ನಿನ್ನ ಮೈಯ್ಯ ಬಣ್ಣ
ನೀನು ಅದನ್ನ ಕೇಳಿ ಪಡೆದುದಲ್ಲ
ನೀನು ಅದನ್ನ ಗಳಿಸಿದುದಲ್ಲ
ಬಣ್ಣ ಬಣ್ಣವೆಂದು ನಿನ್ನ ಸಣ್ಣತನವ ತೋರಿಸಬೇಡ ಅಣ್ಣ!

ಅಣ್ಣ, ನಿನ್ನದಲ್ಲ ನಿನ್ನ ಮೈಯ್ಯ ಬಣ್ಣ
ನಿನ್ನ ಸಾಧನೆ ಸೋತವನ ಹೀಯಾಳಿಸುವುದಲ್ಲ
ನಿನ್ನ ವ್ಯಕ್ತಿತ್ತ್ವ ಬಿದ್ದವನ ಕಡೆಗಣಿಸುವುದಲ್ಲ
ಅವ ಸಣ್ಣವನೆಂದು ನಿನ್ನ ಸಣ್ಣತನವ ತೋರಿಸಬೇಡ ಅಣ್ಣ!

ಅಣ್ಣ, ನಿನ್ನದಲ್ಲ ನಿನ್ನ ಮೈಯ್ಯ ಬಣ್ಣ
ನಿನ್ನ ಕೆಲಸ ಪರರ ನಿಂದಿಸುವುದಲ್ಲ
ನಿನ್ನ ಕಸುಬು ಪರರ ಕಾಲು ಎಳೆಯುವುದಲ್ಲ
ನಾನು ಶ್ರೇಷ್ಠನೆಂದು ನಿನ್ನ ಸಣ್ಣತನವ ತೋರಿಸಬೇಡ ಅಣ್ಣ!

ಅಣ್ಣ, ನಿನ್ನದಲ್ಲ ನಿನ್ನ ಮೈಯ್ಯ ಬಣ್ಣ
ನಿನ್ನ ಗುರಿ ಒಳ್ಳೆಯತನವ ಜರಿಯುವುದಲ್ಲ
ನಿನ್ನ ಸಿರಿ ಪರರ ಹೆಸರು ಕೆಡಿಸುವುದಲ್ಲ
ನನಗಿಂತ ಬೇರೆಯವರಿಲ್ಲವೆಂದು ನಿನ್ನ ಸಣ್ಣತನವ ತೋರಿಸಬೇಡ ಅಣ್ಣ!!!

- ವಚನ ಬ್ರಹ್ಮ (Gururaj Desai)