ನಮಸ್ಕಾರ,
ನಾನು ನನ್ನ ಕಡೆಯ ಬ್ಲಾಗ್ ಬರೆದದ್ದು ೬.೫ ವರ್ಷಗಳ ಮೊದಲು. ಯಾಕೋ ಬ್ಲಾಗ್ ಬರೆಯೋಕೆ ಒಳ್ಳೆಯ ವಿಷಯ ಸಿಗಲಿಲ್ಲವೋ ಅಥವಾ ನನಗೆ ಸಮಯ ಸಿಗಲಿಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಒಂದು ಒಳ್ಳೆಯ ಹವ್ಯಾಸವನ್ನ ಮೂಲೆಗೆ ಒತ್ತಿ ಭೌತವಾದದ ಜೀವನಕ್ಕೆ ಶರಣಾಗಿದ್ದೆ. ಸಂಸಾರ, ಮನೆ, ಕೆಲಸ ಇದರಲ್ಲೇ ತಲ್ಲೀನನಾಗಿದ್ದೆ.
ಈ ಕಳೆದ ಎಲ್ಲ ವರ್ಷಗಳಲ್ಲಿ ನಾನು ನನ್ನ ಜೀವನದಲ್ಲಿ ಎಷ್ಟೇ ಬ್ಯುಸಿ ಆಗಿದ್ದರು, ಒಂದು ಕೆಲಸ ಮಾತ್ರ ತಪ್ಪದೆ ಮಾಡ್ತಿದ್ದೆ ... ನನ್ನ ತಾಯ್ನಾಡಿನ ಪ್ರಸ್ತುತ ವಿದ್ಯಮಾನದ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುವುದು. ಬೆಳಗ್ಗೆ ಎದ್ದರೆ ಮೊದಲ ಕೆಲಸ, ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಭಾರತ ದೇಶದ ಬಗ್ಗೆ, ನನ್ನ ಕರುನಾಡಿನ ಬಗ್ಗೆ ತಿಳಿದುಕೊಳ್ಳುವುದು.
ಇವತ್ತು ಒಂದು ಶೀರ್ಷಿಕೆ ಓದಿದೆ - "ಸಿದ್ಧರಾಮಯ್ಯ ಸರ್ಕಾರದಿಂದ ಲಿಂಗಾಯಿತ ಪ್ರತ್ಯೇಕ ಧರ್ಮ ಘೋಷಣೆ".
ಇದು ಕೆಲ ವರ್ಷಗಳಿಂದ ನಡೆಯುತ್ತಿದ್ದ ವಿದ್ಯಮಾನವೆಂದು ನನಗೆ ಅರಿವಿದೆ, ಆದರೆ ವಿಪರ್ಯಾಸವೆಂದರೆ ಜನರಿಂದ, ಜನರಿಗಾಗೇ ಆರಿಸಿಬಂದಂತಹ ಸರ್ಕಾರ ಜನರನ್ನೇ ಒಡೆದು ಆಳುವುದನ್ನು ನೋಡಿ ಮನಸ್ಸಿಗೆ ಬೇಜಾರಾಯಿತು.
ನಾನು ಹುಟ್ಟಿ ಬೆಳದದ್ದು ಒಂದು ಮಧ್ಯಮ ವರ್ಗದ ಲಿಂಗಾಯಿತ ಕುಟುಂಬದಲ್ಲಿ. ಇಲ್ಲಿ ನಾನು ನನ್ನ ಸಮಾಜದ ಹೆಸರು ಹೇಳಬೇಕಾದದ್ದು ಅನಿವಾರ್ಯ. ನನ್ನ ತಂದೆ ತಾಯಿ ಒಟ್ಟು ಸೇರಿ ದುಡಿದ ಆದಾಯದಲ್ಲಿ ಅವರು ಸೇರಿ ಆರು ಜನ ಕುಟುಂಬ ಸಾಗುತಿತ್ತು. ನಮ್ಮ ಹೊಟ್ಟೆ, ಬಟ್ಟೆ, ಶಾಲೆ, ದಿನ ಖರ್ಚು ಮೀರಿ ನಮ್ಮ ಭವಿಷ್ಯಕ್ಕೆ ಅವರು ಮನೆಯೊಂದನ್ನು ಬಿಟ್ಟರೆ ಮತ್ತೆ ಏನು ಸೇರಿಸೋಕೆ ಆಗಲಿಲ್ಲ. ಹಾಂಗಂತ ನಾನು ಮತ್ತು ನನ್ನ ಮೂವರು ಸಹೋದರಿಯರು ಎಂದೂ ವಿಲಾಸಿ ಜೀವನಕ್ಕಾಗಿ ಹಪಹಪಿಸಿದವರಲ್ಲ, ಬೇರೆಯವರ ಕಂಡು ಅಸೂಯೆಪಟ್ಟವರಲ್ಲ. ನಾನು ಶಾಲಾ ಪ್ರವಾಸಕ್ಕೆ ಹೋದರೆ ನನ್ನ ಸಹೋದರಿಯರು ತಾವು ಹೋಗಬೇಕೆಂದು ಜಗಳ ಮಾಡಿದ್ದಿಲ್ಲ. ಅವರು ಬಳೆ, ಬಟ್ಟೆ ಖರೀದಿಸಿದರೆ ನನಗು ಬೇಕೆಂದು ತಗಾದೆ ತೆಗೆದವನಲ್ಲ. ನನ್ನ ಗೆಳೆಯರು ಮಾಧ್ಯಮಿಕ ಶಾಲಾ ಹಂತದಲ್ಲೇ ದ್ವಿಚಕ್ರ ವಾಹನ ಕೊಂಡರೂ ನಾನು ಎಂದೂ ನನಗೆ ಬೇಕೆಂದು ಕಾಡಿದವನಲ್ಲ. ಇದ್ದದೊಂದು ಸೈಕಲ್ ಅನ್ನೇ ತುಳಿದು ಇಂಜಿನಿಯರಿಂಗ್ ಮುಗಿಸಿದವ ನಾನು. ನನ್ನ ತಂದೆ, ತಾಯಿ ಬೇರೆಯವರ ಮುಂದೆ ಎಂದೂ ಕೈ ಚಾಚಿದವರಲ್ಲ. ಇದು, ನಮ್ಮ ತಂದೆ ತಾಯಿ ಅಂತಹ ಕಷ್ಟದಲ್ಲೂ ನಮಗೆ ಜೀವನವನ್ನು ಸ್ವಾಭಿಮಾನದಿಂದ ಬದುಕಲು ಹಾಕಿಕೊಟ್ಟ ಬುನಾದಿ. ಅವರ ಆ ದಿಟ್ಟ ನಡೆಗಳೇ ನಮಗೆ ದಾರಿದೀಪವಾಗಿ ಜೀವನದಲ್ಲಿ ಯಾರ ಮುಂದೆಯು ಕೈ ಚಾಚದೆ ಬೆಳೆಯಲು ಆಸರೆಯಾದವು.
ಈ ಎಲ್ಲ ಸಂಗತಿಗಳನ್ನು ನಾ ಏಕೆ ಹೇಳಿದೆ ಅಂದರೆ, ಇದು ನಮ್ಮ ತಂದೆ ತಾಯಿ ಪಾಲಿಸಿದ ನಿಜವಾದ ಬಸವ ತತ್ತ್ವ. ಕಷ್ಟ ಪಟ್ಟು ನಮ್ಮನ್ನು ಬೆಳೆಸಿದರೆ ಹೊರತು ನಾವು ಬಡವರು, ವೀರಶೈವರು, ಲಿಂಗಾಯತರು, ನಮಗೆ ಶಾಲಾ ಫೀಸ್ ನಲ್ಲಿ ವಿನಾಯತಿ ಕೊಡಿ, ನಮಗೆ ಕಾಲೇಜು ಸೀಟಿನಲ್ಲಿ ರಿಸೆರ್ವಶನ್ ಕೊಡಿ ಎಂದು ಹೋದವರಲ್ಲ. ಅವರ ಆ ಸ್ವಾಭಿಮಾನದ ನಡೆಗಳೇ ನಮ್ಮನ್ನು ಪ್ರಸ್ತುತ ವ್ಯವಸ್ಥೆಯನ್ನು ಒಪ್ಪಿಕೊಂಡು ಎಲ್ಲರ ಜೊತೆ ಸರಿ ಸಮಾನವಾಗಿ ಪೈಪೋಟಿಗಿಳಿದು ಕಲಿತು ದೊಡ್ಡವರಾಗೇ ಸ್ವಂತ ಬಲದ ಮೇಲೆ ನಾವು ನಾಲ್ಕು ಜನ ಮಕ್ಕಳು ನಮ್ಮ ತಂದೆ ತಾಯಿಗೆ ಕೀರ್ತಿ ತಂದವರು. ಇದೆಲ್ಲ ಆಗಲು ಸಾಧ್ಯವಾದದ್ದು ನಮ್ಮ ಬೆಳೆಸಿದವರ ಶ್ರಮದಿಂದ, ಪಾಲಿಸಿದ ದೈವದಿಂದ.

ಬಸವಣ್ಣನವರು ಮಡಿವಂತಿಕೆಯನ್ನು ತ್ಯಜಿಸಿ ಎಲ್ಲರನ್ನು ಅಪ್ಪಿಕೊಂಡು ಎಲ್ಲರೂ ಒಂದು ಎಂದರು, ಮೇಲು ಕೀಳೆಂಬ ಭಾವನೆಗಳನ್ನು ಕಿತ್ತೊಗೆದು ಮಾನವೀಯತೆಯ ಪ್ರತಿಪಾದಿಸಿದ ಮಹಾನ್ ಲೋಕ ಪುರುಷರು. ಸಮಾಜದಲ್ಲಿ ಎಲ್ಲ ಕಟ್ಟಳೆಗಳನ್ನೂ ಮೀರಿ ನಿಂತು ನಿಜವಾದ ಬದುಕುವ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಚೇತನ.
ಇಂದು ಅಂತಹ ಮಹಾನ್ ಬಸವಣ್ಣನವರ ಹೆಸರು ಹೇಳಿಕೊಂಡು ಅಧಿಕಾರದಲ್ಲಿರುವ, ನಾವೇ ಹುಟ್ಟು ಹಾಕಿರುವ ಪುಢಾರಿಗಳು ನಮ್ಮನ್ನ ಒಡೆದು ಆಳಲು ಅವಕಾಶ ಮಾಡಿಕೊಟ್ಟಿದ್ದೇವೆ. ಇಂಥ ನಾಯಕರು ಎನಿಸಿಕೊಂಡ ಅವಿವೇಕಿ ನಾಲಾಯಕರು ತಮ್ಮ ಅಧಿಕಾರ ಲಾಭಕ್ಕಾಗಿ ಜನರ ಭಾವನೆಯೊಂದಿಗೆ ಚಲ್ಲಾಟವಾಡಿದ್ದಾರೆ. ಇಂಥವರನ್ನು ನಮ್ಮ ನಾಯಕರು ಎಂದು ಒಪ್ಪಿಕೊಂಡದ್ದಕ್ಕೆ ನಾವು ಮತ್ತೆ ೯೦೦ ವರ್ಷ ಹಿಂದೆ ಹೋದಂತಾಗಿದೆ. ಇದನ್ನು ಸರಿ ಪಡಿಸಲು ಇನ್ನು ಬಸವಣ್ಣ ಮತ್ತೆ ಉದಯವಾಗಲಾರರು. ಯಾಕೆಂದರೆ, ಆ ಬಸವಣ್ಣನವರು ನಮಗೆ ಒಂದು ಅವಕಾಶ ಕಲ್ಪಿಸಿ ಮಾನವೀತೆಯ ಮೌಲ್ಯವನ್ನು ಕಲಿಸಿ ಹೋದರು. ಈಗ ನಾವು ಅವರ ಪರೀಕ್ಷೆಗೊಳಗಾಗಿದ್ದೇವೆ.
ನಾವು ಈ ಅಧಿಕಾರದಾಹಿ ರಾಜಕಾರಣಿಗಳ ಬೆನ್ನು ಹತ್ತಿ ನಮ್ಮ ಮಕ್ಕಳನ್ನು, ಬರುವ ಪೀಳಿಗೆಯನ್ನು, ಸವಾಲುಗಳನ್ನು ಎದುರಿಸಲಾರಂದಹ ಪೀಳಿಗೆಯನ್ನಾಗಿ ರೂಪುಗೊಳ್ಳುವಂತೆ ಮಾಡುತ್ತಿದ್ದೇವೆ. ನಾವು ಇಲ್ಲಿಯವರೆಗೆ ಜಾತಿ ವ್ಯವಸ್ಥೆ, ಮೀಸಲಾತಿ ವ್ಯವಸ್ಥೆಯ ಬಗ್ಗೆ ಆಕ್ರೋಶ ತೋರುತ್ತ ಬಂದಿದ್ದು, ನಮ್ಮ ಮುಂಬರುವ ಪೀಳಿಗೆಗೆ ಅದೇ ಕೆಟ್ಟ ವ್ಯವಸ್ಥೆಯಲ್ಲಿ ನೂಕಲು ಸಿದ್ಧವಾಗುತ್ತಿದ್ದೇವೆ. ಇದು ನಿಜವಾಗಿಯೂ ನಾಚಿಕೆಗೇಡು.
ಲಿಂಗಾಯತ ಸಮಾಜ ಕಷ್ಟಪಟ್ಟು ದುಡಿದು ಬದುಕುವ ಸಮಾಜ. ನಾವು ಎಂದಿಗೂ ಮೀಸಲಾತಿ ಕೊಡಿ ಎಂದು ಪ್ರತಿಭಟನೆ ಮಾಡಿದವರಲ್ಲ, ಬಸ್ಸುಗಳನ್ನು ಸುಟ್ಟವರಲ್ಲ, ಸಾರ್ವಜನಿಕರಿಗೆ ತೊಂದರೆ ಕೊಟ್ಟವರಲ್ಲ. ಈ ಪುಡಿ ನಾಯಕರುಗಳು ಅಧಿಕಾರ ಕಳೆದುಕೊಳ್ಳುವ ಭಯದಿಂದ ಜನರನ್ನು ಒಡೆಯುತ್ತಿದ್ದಾರೆ. ಇದರ ವಿರುದ್ಧ ಒಂದು ಆಂದೋಲನ ಶುರುವಾಗಬೇಕು. ಅದು ಲಿಂಗಾಯಿತ ವೀರಶೈವರಿಂದಲೇ ಆಗಬೇಕು. ನಮಗೆ ಬೇರೆ ಧರ್ಮವಾಗಿ ವಿಂಗಡಿಸುವುದು ಬಸವಣ್ಣನವರಿಗೆ ಮಾಡಿದ ಅವಮಾನ, ನಮಗೆ ಮೀಸಲಾತಿ ಕೊಡುವ ಮಾತುಗಳನ್ನಾಡುವುದೇ ಅಪರಾಧವೆಂದು ಈ ಸರ್ಕಾರದ ನಿರ್ಣಯದ ವಿರುದ್ಧ ಹೋರಾಡಬೇಕಿದೆ. ಇದು ಸಾಧ್ಯವಾಗಬೇಕಾದರೆ ಎಲ್ಲರೂ ಒಗ್ಗೂಡಬೇಕು, ದೇಶವನ್ನು ಕಟ್ಟಲು ಮುಂದಾಗಬೇಕು. ಪ್ರತಿಯೊಬ್ಬ ಲಿಂಗಾಯತ-ವೀರಶೈವ ವ್ಯಕ್ತಿ ಬಸವಣ್ಣನವರ ಅನುಯಾಯಿಯಾಗಿ ಒಂದು ದೊಡ್ಡ ಆಂದೋಲನಕ್ಕೆ ಅಣಿಯಾಗಬೇಕು.
ಈಗ ಭಾರತ ದೇಶಕ್ಕೆ ಒಂದೊಳ್ಳೆಯ ಪ್ರಧಾನಮಂತ್ರಿ ದೊರೆತಿದ್ದು, ಅವರು ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಹಗಲು ಇರುಳು ಎನ್ನದೆ ದೇಶಕ್ಕಾಗಿ ದುಡಿಯುತ್ತಿದ್ದಾರೆ, ಮಿಕ್ಕೆಲ್ಲ ಕಳ್ಳರು ಅಧಿಕಾರವಿಲ್ಲದೆ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ನಾನು ಈ ಮೂಲಕ ಹೇಳುವುದೇನೆಂದರೆ ಲಿಂಗಾಯತ ಅಥವಾ ವೀರಶೈವ ಒಂದು ಜೀವನ ಪದ್ಧತಿ. ಇದು ಎಂದಿಗೂ ಧರ್ಮವಾಗಲಾರದು. ನಾವು ದುಡಿದುದ್ದರಲ್ಲಿ ಹಂಚಿ ತಿನ್ನುವ ಜನ. ಇದೇ ಸಾರವನ್ನು ಹಿಂದೂ ಜೀವನ ಶೈಲಿಯಲ್ಲಿಯೂ ಪ್ರತಿಪಾದಿಸಲಾಗಿದೆ. ಹಾಗಾಗಿ ನಾವುಗಳು ಬಸವಣ್ಣನವರ ಅನುಯಾಯಿಗಳು, ಹಿಂದೂಗಳು. ದಯವಿಟ್ಟು ನಿಮ್ಮ ಬರುವ ಪೀಳಿಗೆಯನ್ನು ಈ ರಾಜಕೀಯಕ್ಕೆ ಬಲಿ ಕೊಡಬೇಡಿ. ನಾಳೆ ನಮ್ಮ ಮಕ್ಕಳು ಬೀದಿಗೆ ಬಿದ್ದು ನಾವು ಅಲ್ಪಸಂಖ್ಯಾತರು, ನಮಗೆ ಮೀಸಲಾತಿ ಕೊಡಿ ಎಂದು ಬಡಿದಾಡುವಂತೆ ಮಾಡಬೇಡಿ. ಅವರಿಗೆ ಒಳ್ಳೆಯ ಶಿಕ್ಷಣ ಕೊಟ್ಟು ಈ ಮೀಸಲಾತಿ ಪಿಡುಗಿನ ವಿರುದ್ಧ, ಧರ್ಮ ರಾಜಕಾರಣ ವಿರುದ್ಧ, ಅಲ್ಪಸಂಖ್ಯಾತರ ಓಲೈಸುವವರ ವಿರುದ್ಧ ಹೋರಾಡಿ ಸ್ವಾಭಿಮಾನದಿಂದ ಬದುಕುವಂತೆ ಮಾಡಿ.
- ಗುರುರಾಜ್ ದೇಸಾಯಿ
ಬೇ ಏರಿಯಾ, ಕ್ಯಾಲಿಫೋರ್ನಿಯಾ