ಸೋಮವಾರ, ಡಿಸೆಂಬರ್ 7, 2020

ಬಯಕೆ






ನಿನ್ನ ಕಂಗಳ ಅಂಗಳದಲಿ
ಆಡುವ ಬಯಕೆ ನನದು,
ಅವಕಾಶ ಕೊಡುವೆಯಾ ?

ನಿನ್ನ ಕಣ್ಣ ರೆಪ್ಪೆಯ ತಪ್ಪಲಿನಲಿ
ದಣಿವಾರಿಸಿಕೊಳ್ಳುವ ಬಯಕೆ ನನದು,
ಅವಕಾಶ ಕೊಡುವೆಯಾ ?

ನಿನ್ನ ಕಣ್ಣ ಕಾಡಿಗೆಯಲಿ
ಅವಿತುಕೊಳ್ಳುವ ಬಯಕೆ ನನದು,
ಅವಕಾಶ ಕೊಡುವೆಯಾ ?

ನಿನ್ನ ಕಣ್ಣಾಲಿಗಳಲಿ
ಈಜಬೇಕೆಂಬ ಬಯಕೆ ನನದು,
ಅವಕಾಶ ಕೊಡುವೆಯಾ ?

ನಿನ್ನ ಕಣ್ಗಾವಲಿನಲಿ
ಮಣ್ಣಾಗಬೇಕೆಂಬ ಬಯಕೆ ನನದು,
ಅವಕಾಶ.. ಕೊಡುವೆಯಾ.. 

- ಗುರುರಾಜ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ