ಓ ಪ್ರೀತಿಯೇ ನೀನೆಷ್ಟು ಕುರುಡು
ನೀ ಹುಟ್ಟಲು ಬೇಕು ಜೀವಗಳು ಎರಡು
ನೀನಿಲ್ಲದೆ ಅವುಗಳ ಬಾಳು ಬರಡು !
ಓ ಪ್ರೀತಿಯೇ ನಿನ್ನಲ್ಲಿ ಕಟ್ಟಳೆಗಳಿಲ್ಲ
ನಿನಗೆ ಸಲಿಂಗಿ, ದ್ವಿಲಿಂಗಿ ಎಂಬ ಬೇಧವಿಲ್ಲ
ನೀನಿಲ್ಲದೆ ಈ ಜಗದೊಳು ನಶ್ವರವೆಲ್ಲ !
ಓ ಪ್ರೀತಿಯೇ ನೀನೆಷ್ಟು ಅಗೋಚರ
ನಿನ್ನ ಅರಿತು ನಡೆದರೆ ಆಚಾರ
ನಿನ್ನ ಜಗಕೆ ಉಣಬಡಿಸಿದರೆ ಸ್ವರ್ಗ ಎಂಬುದು ನನ್ನ ವಿಚಾರ !
ಓ ಪ್ರೀತಿಯೇ ನೀನೆಷ್ಟು ಜನರಿಗೆ ಸ್ಫೂರ್ತಿ
ನಿನ್ನ ಇರುವಿಕೆಯಿಂದಲೇ ಅವರ ಜೀವನ ಪೂರ್ತಿ
ನಿನ್ನ ಎಲ್ಲರೂ ಅಳವಡಿಸಿಕೊಂಡರೆ ಇಡೀ ಮಾನವ ಕುಲಕೇ ಕೀರ್ತಿ !!!
ಪ್ರೀತಿಯಿಂದ,
ಗುರುರಾಜ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ