ಕನ್ನಡಾಂಬೆಯ ಮಕ್ಕಳು ನಾವು
ಸಾಗರದಾಚೆ ನೆಲೆಸಿಹೆವು ।।
ತವರೂರಿನ ವ್ಯಾಮೋಹವ ತೊರೆಯದೆ ।
ಗೂಡು ಕಟ್ಟಲು ಬಂದಿಹೆವು ।।
ನೆಲ ಜಲ ಕಲೆಯ ಸಿರಿತನಕೆ
ಬಲವ ಕೊಡುತಲೆ ಸಾಗುವೆವು ।।
ಕನ್ನಡ ನಾಡಿನ ಸಕಲ ವೈಭವವ ।
ಉತ್ತುಂಗಕ್ಕೊಯ್ಯಲು ಶ್ರಮಿಸುವೆವು ।।
ತಾಯ್ನಾಡಿನ ಋಣವನು ಮರೆಯದೆ
ನವ ಪೀಳಿಗೆಗೆ ಹೇಳುವೆವು ।।
ಸಿರಿಗನ್ನಡ ಭಾಷೆಯ ಕಲಿಸುತ ನಾವು ।
ಕನ್ನಡ ಕಲಿಗಳ ಬೆಳೆಸುವೆವು ।।
ಕನ್ನಡದ ಬಳಕೆಯ ಬೆಳೆಸುವೆವು
ಸಿರಿಗಂಧದ ಕಂಪನು ಪಸರಿಸುವೆವು
-
ಗುರುರಾಜ್ - ವಚನ ಬ್ರಹ್ಮ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ