ಇಲ್ಲಿ ಯಾವುದು ನೈಜ ಪ್ರೀತಿಯೆಂದು ಭಾವಿಸಲಿ
ಕಾಂಚಾಣವೆಂಬ ಮಾಯೆಯಿಂದ ಎಲ್ಲವನ್ನೂ ತೂಗುತಿರಲು
ಈ ಮುಗ್ಧ ಮನಸ್ಸುಗಳ ನಾ ಹೇಗೆ ತಿದ್ದಲಿ
ನನ್ನವರೆಂಬ ಭ್ರಮೆ ಅಂಟಿಕೊಂಡಿರಲು
ಇಲ್ಲಿ ನಾನು ನನ್ನವರೆಂದು ಹೇಗೆ ನಂಬಲಿ
ಎಲ್ಲರೂ ಬೆನ್ನಿಗೆ ಚೂರಿ ಇರಿಯುತಿರಲು
ಈ ಬೆತ್ತಲೆ ಜಗಕೆ ನಾ ಹೇಗೆ ಬಟ್ಟೆ ತೊಡಿಸಲಿ
ದಗಾ, ವಂಚನೆಗಳೆಂಬ ರೋಗ ಮೆತ್ತಿಕೊಂಡಿರಲು
ಇಲ್ಲಿ ಯಾವುದು ನನ್ನದೆಂದು ಹೇಗೆ ಗುರುತಿಸಲಿ
ಸಂಶಯವೆಂಬ ಭೂತ ಸುತ್ತಿಕೊಂಡಿರಲು
ಈ ಕತ್ತಲೆ ಜಗದಲಿ ನಾ ಹೇಗೆ ಬೆಳಕು ಚೆಲ್ಲಲಿ
ಅಂಧಕಾರವೆಂಬ ಕಾರ್ಮೋಡ ಕವಿದಿರಲು
-
ಗುರುರಾಜ ದೇಸಾಯಿ (ವಚನ ಬ್ರಹ್ಮ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ