ಭಾರತದ ಮಕ್ಕಳಲ್ಲಿ ಇರುವ ಕನಿಷ್ಠ ಪ್ರತಿಭೆ ಎಂದರೆ ಕ್ರಿಕೆಟ್. ನಾನೂ ಕ್ರಿಕೆಟ್ ಆಟದಲ್ಲಿ ಸಚಿನ್ ತೆಂಡೂಲ್ಕರ್ ಆಗಬೇಕೆಂಬ ಆಸೆಯಿತ್ತು. ಆತನಿಗೂ ನನಗೂ ಇದ್ದ ಸಮಾನತೆಗಳೆಂದರೆ ಆತನಿಗೆ ಕ್ರಿಕೆಟ್ ಅಂದರೆ ತುಂಬಾ ಇಷ್ಟ, ನನಗೂ ತುಂಬಾನೇ ಇಷ್ಟ. ಆತನಿಗೆ ಶಾಲೆಯೆಂದರೆ ಬೇಜಾರು, ನನಗೂ ಅಷ್ಟೇ. ಆತನ ತಂದೆ ಮಾತೃಭಾಷೆ ಮರಾಠಿಯಲ್ಲಿ ಉಪನ್ಯಾಸಕರು. ಹಾಗೆಯೇ ನನ್ನ ಅಮ್ಮ ಮಾತೃಭಾಷೆ ಕನ್ನಡದಲ್ಲಿ ಉಪನ್ಯಾಸಕಿ. ಆತನ ತಂದೆಗೆ ಕ್ರಿಕೆಟ್ ಅಂದರೆ ತುಂಬಾ ಸಿಟ್ಟು, ನನ್ನ ಅಮ್ಮನಿಗೂ ಕ್ರಿಕೆಟ್ ಅಂದರೆ ತುಂಬಾ ಸಿಟ್ಟು. ಇಷ್ಟು ಸಾಮ್ಯತೆಗನ್ನು ಬಿಟ್ಟರೆ ನನ್ನ ಮಿಕ್ಕ ಗುಣಗಳೆಲ್ಲ ನನಗೆ ಪೇಟೆಂಟ್ ತಂದುಕೊಡಬಹುದು.
ಅವರ ಇಬ್ಬರ ಸಿಟ್ಟಿಗೆ ಒಂದೇ ಕಾರಣ "ಕ್ರಿಕೆಟ್ ಏನು ಹೊಟ್ಟೆ ತುಂಬಿಸುತ್ತದೆಯೇ?". ಶಾಲೆಯಲ್ಲಿ ಉತ್ತಮ ಅಂಕಗಳನ್ನು ತೆಗೆದು ಒಳ್ಳೆಯ ಉದ್ಯೋಗದಲ್ಲಿ ಸೇರಿಕೊಂಡರೆ ಮಾತ್ರ ಅವರ ಪ್ರಕಾರ ಒಂದು ಸಾಧನೆ.
ನನ್ನ ಬಾಲ್ಯದ ದಿನಗಳಲ್ಲಿ ನಾನು ಒಂದು ಥರ ಪುಟ್ಟ ಹಿಟ್ಲರ್ ಹಾಗೆ ಇದ್ದೆ. ಸಿಟ್ಟು ಯಾವಾಗಲೂ ನನ್ನ ಮೂಗಿನ ನೇರಕ್ಕೆ, ನನ್ನ ಮಾತು ನಡೆಯಲೇಬೇಕು, ಅದು ಮನೆಯಲ್ಲಿರಲಿ ಅಥವಾ ಹೊರಗಡೆ ಇರಲಿ. ಮನೆಯಲ್ಲಿ ಏನೆ ನಡೆದರೂ, ನಡೆಯಬೇಕಾದರೂ ನಾನೇ (ದೊಣ್ಣೆ) ನಾಯಕ. ನನ್ನ ಮಾತಿನಂತೆ ಆಗಬೇಕು. ಇದನ್ನು ನಾನು ಮನೆಯಿಂದ ಹೊರಗಡೆಯೂ ರೂಢಿಸಿಕೊಂಡಿದ್ದೆ. ನಮ್ಮದು ೧೦-೧೨ ಮಕ್ಕಳು ಇದ್ದ ಒಂದು ಗುಂಪು. ಅದರಲ್ಲಿ ನಾನೇ ಸ್ವಘೋಷಿತ ನಾಯಕ. ನಾನು ೭-೮ ವಯಸ್ಸಿನವನಿದ್ದೆ. ಆಗ ಎಲ್ಲ ಮಕ್ಕಳು ಬಿಜಾಪುರದ ಪ್ರತಿಷ್ಥಿತ ಶಾಲೆಗಳಲ್ಲಿ ಒಂದಾದ ವಿ. ವಿ. ಸಂಘ ಶಾಲೆಗೆ ಹೋಗ್ತಿದ್ವಿ. ಶಾಲೆಯಿಂದ ಬಂದವರೇ ಒಂದು ತೊಟ್ಟು ನೀರು ಕುಡಿಯದೆ ಈ ೧೦-೧೨ ಮಕ್ಕಳ ಗುಂಪು ಲಗ್ಗೆ ಇಡುತ್ತಿದ್ದುದು ಹೊಸ ಮನೆ ಕಟ್ಟಡದ ಎದುರುಗಡೆ ಹಾಕಿದ್ದ ಮರಳು. ಆ ಮರಳಿನಲ್ಲಿ ನಮ್ಮ ೧೦-೧೨ ಜನರ ಬಸ್ ಗಳು (ಇಟ್ಟಿಗೆ) ಓಡಾಡಿದ್ದೆ ಓಡಾಡಿದ್ದು. ಈ ಬಸ್ಗಳು ಸಂಜೆ ವರೆಗೂ ಬಿಡುವಿಲ್ಲದೆ ಮರಳಿನಲ್ಲಿ ಮೂಡಿದ್ದ ರಸ್ತೆಗಳಲ್ಲಿ ಓಡಾಡಿ ಓಡಾಡಿ ಕೊನೆಗೆ ಪೂರ್ತಿ ಮರಳು ರಸ್ತೆಗೆ ಬಂದುಬಿಡುತ್ತಿತ್ತು. ಆಗ ಟ್ರಾಫಿಕ್ ಪೋಲಿಸ್ (ಕಟ್ಟಡದ ಉಸ್ತುವಾರಿ ವಹಿಸಿದವ) ನಮ್ಮನ್ನು ಬೆನ್ನತ್ತಿದಾಗಲೇ ನಾವು ಮರಳಿ ನಮ್ಮ ಮನೆ ಸೇರುತ್ತಿದ್ದೆವು. ಇದು ನಾವು ಚಾಚೂತಪ್ಪದೆ ಪಾಲಿಸುತ್ತಿದ್ದ ದಿನಚರಿ. ಏನೋ ನೆಪ ಒಡ್ಡಿ ಶಾಲೆ ತಪ್ಪಿಸುತ್ತಿದ್ದೆವೆ ವಿನಃ ನಮ್ಮ ಮರಳು ಹಾಳು ಮಾಡುವ ದಂಧೆ ನಿಲ್ಲುತ್ತಿರಲಿಲ್ಲ. ಇದು ೨-೩ ವರ್ಷ ಸದ್ದಿಲ್ಲದೇ ಸಾಗಿತು. ಕೊನೆಗೆ ಕಟ್ಟಡದ ಮಾಲೀಕರು ಇಟ್ಟಿಗೆಯನ್ನು ತಮ್ಮ ಸೇಫ್ ಲಾಕರ್ ಗಳಲ್ಲಿ (ಒಂದು ರೂಮ್ನಲ್ಲಿ ಬೀಗ ಜಡಿದು) ಇಟ್ಟುಕೊಳ್ಳಲು ಶುರು ಮಾಡಿದರು. ಆದರೆ ಇದು ನಮ್ಮನ್ನು ಕುಗ್ಗಿಸಲಿಲ್ಲ. ನಾವು ನಮ್ಮ ತಂಡದೊಂದಿಗೆ ನಮ್ಮ ವಿರೋಧಿಗಳ (ಕಟ್ಟಡ ದ ಮಾಲೀಕರು) ಷಡ್ಯಂತ್ರ ವನ್ನು ಚರ್ಚಿಸಲಾಗಿ ಇಟ್ಟಿಗೆಯ ಬದಲಾಗಿ ಒಂದು ಹೊಸ ವಿಧವಾದ ಆಯುಧವನ್ನು ಸೃಷ್ಟಿ ಮಾಡಿದೆವು, ಬಸ್ ಆಟದ ಬದಲಾಗಿ ಯುದ್ಧದಾಟ ಶುರು ಮಾಡಿದೆವು. ಆ ಯುದ್ಧಕ್ಕೆ ಬೇಕಾದ ಆಯುಧ ಮತ್ತೇನು ಅಲ್ಲ ಅದು ಸ್ವನಿರ್ಮಿತ ಏ ಕೆ ೪೭ (ಉತ್ತರ ಕರ್ನಾಟಕದಲ್ಲಿ ಯಥೇಚ್ಚವಾಗಿ ಸಿಗುವ ಜಾಲಿಕಂಟಿಯ ರೆಂಬೆ).
ಈಗ ನಮ್ಮ ಯುದ್ಧದಾಟದಲ್ಲಿ ಇನ್ನೂ ರೋಮಾಂಚಕತೆ ಸೃಷ್ಟಿಯಾಯಿತು. ಎರಡು ದೇಶಗಳು ಸೃಷ್ಟಿಯಾದವು. ಒಂದು ಭಾರತ ಇನ್ನೊಂದು ಪಾಕಿಸ್ಥಾನ. ನಮ್ಮ ಈಗಿನ ಕಂಪೆನಿಗಳಲ್ಲಿ ಸ್ವಿಚ್ ಮಾಡುತ್ತಾರಲ್ಲ ಹಾಗೆ ಕೆಲವು ಯೋಧರು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಸ್ವಿಚ್ ಆಗ್ತಿದ್ರು. ಆದರೆ ನಾನು ಮಾತ್ರ ಯಾವಾಗಲು ಭಾರತದ ಆರ್ಮಿ ಜನರಲ್. ಈ ಏಕಾಧಿಪಥ್ಯ ವನ್ನು ಯಾರೇ ಪ್ರಶ್ನಿಸಿದರೂ ಅವರಿಗೆ ಕೋರ್ಟ್ ಮಾರ್ಷಲ್ (ದೇಶದ್ರೋಹ ಆಪಾದನೆಗೆ ಒಳಪಡಿಸುವುದು) ಕಟ್ಟಿಟ್ಟ ಬುತ್ತಿ. ಹೀಗೆ ನಮ್ಮ ಅಕ್ರಮ ಮರಳು ನೆಲಸಮವಾಗಿಸೋ ದಂಧೆ ಭರದಿಂದ ಸಾಗಿತ್ತು. ಈಗಿನ ಕರ್ನಾಟಕದಲ್ಲಿನ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿರುವ ಹಾಗೆ, ಕೊನೆ ಕೊನೆಗೆ ನಮ್ಮ ಗಲ್ಲಿಯಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣವಾಗಿ ನಮ್ಮ ಮರಳು ನೆಲಸಮ ದಂಧೆಗೆ ಕೊನೆಬಂದಿತು.
ಆದರೆ ನಮ್ಮ ಯೋಧರು ಸೋಲೊಪ್ಪಿಕೊಳ್ಳಲು ಸುತಾರಾಂ ಸಿದ್ಧರಿರಲಿಲ್ಲ. ಗಲ್ಲಿಯಲ್ಲಿನ ಜನರಿಗೆ ನಮ್ಮ ಕಾಟಕ್ಕೆ ಕೊನೆಯಾಯಿತೆಂದು ನಿಟ್ಟುಸಿರು ಬಿಡುವಷ್ಟರಲ್ಲಿ ಹುಟ್ಟಿಕೊಂಡಿದ್ದೇ ಗಲ್ಲಿ ಕ್ರಿಕೆಟ್. ನಮ್ಮ ತಂಡ ದೊಡ್ಡದಾಯಿತು, ನಾವೂ ಸಹ ದೊಡ್ಡ ದೊಡ್ಡ ಕಂಪನಿಗಳು ಜನರನ್ನು ಉದ್ಯೋಗಕ್ಕೆ ತೆಗೆದುಕೊಳ್ಳುವ ಹಾಗೆ ಹೊಸ ಪ್ರತಿಭೆಗಳನ್ನು (ಫ್ರೆಶರ್ಸ್) ನಮ್ಮ ತಂಡಕ್ಕೆ ಸೇರಿಸಿಕೊಂಡೆವು. ಈ ತಂಡಕ್ಕೆ ಅಘೋಷಿತ ಟಾರ್ಗೆಟ್ ಏನೆಂದರೆ ದಿನಕ್ಕೆ ೨-೩ ಕಿಟಕಿ ಕಾಜುಗಳು ಪುಡಿಯಾಗಬೇಕು. ಒಂದು ಅಜ್ಜ, ಅಥವಾ ಅಜ್ಜಿಯ ಕನ್ನಡಕ ಒಡೆಯಬೇಕು. ಚೆಂಡು ಯಾರದಾದರೂ ಮನೆ ಸೇರಿ ರಾದ್ಧಾಂತ ಸೃಷ್ಟಿಯಾಗಬೇಕು, ಕನಿಷ್ಟಪಕ್ಷ ಒಂದಿಬ್ಬರು ಆಟಗಾರರು ಕೈ/ಕಾಲು ಮಂಡಿ ಕೆತ್ತಿಕೊಳ್ಳಬೇಕು.
ಹೀಗೆ ದಿನಕ್ಕೆ ಏನಿಲ್ಲವೆಂದರೂ ತಂಡದ ದೊಣ್ಣೆ ನಾಯಕನ (ನಾನು) ವಿರುದ್ಧ ೨-೩ ಗಲ್ಲಿಯ ನಾಗರಿಕರಿಂದ ಗಲ್ಲಿಯ ಕಮಿಷನರ್ (ನನ್ನ ಅಮ್ಮ) ಹತ್ತಿರ ಎಫ್. ಆಯ್. ಆರ್ ಗಳು ದಾಖಲಾಗಲು ಶುರುವಾದವು. ಇದು ನನ್ನನ್ನು ಕೆಲವೇ ದಿನಗಳಲ್ಲಿ ಬಯಸದೆ ಬಂಧ ಭಾಗ್ಯದಂತೆ ವಿ(ಕು)ಖ್ಯಾತ ಗೊಳಿಸಿದವು. ನಮ್ಮ ಗಲ್ಲಿಯಲ್ಲಿನ ಜನರಿಗೆ ದಿನಾಲೂ ಅವರ ಸಂಬಂಧಿಗಳು ನೆನಪಿಗೆ ಬಾರದಿದ್ದರೂ 'ಗುರುರಾಜ್ ದೇಸಾಯಿ' ಎಂಬ 'ಸೀಧಾ ಸಾಧ' ಬಾಲಕನ ಹೆಸರು ನೆನಪಿಗೆ ಬಾರದೆ ಇರದ ದಿನಗಳಿಲ್ಲ.
ಒಮ್ಮೊಮ್ಮೆ ಈ ನನ್ನ ಅಪರಾಧಗಳ ತೀವ್ರತೆ ಹೆಚ್ಚಾದಾಗ ನಾನು ಗಡೀಪಾರ್(೨-೩ ಘಂಟೆಗಳ ಕಾಲ ಓಡಿಹೋಗಿರೋದು ) ಆಗಿರೋದೂ ಇದೆ. ಕಮೀಶನರರಿಂದ (ನನ್ನ ಅಮ್ಮ) ಹಿತನುಡಿಗಳು, ನಾನು ಅದನ್ನು ಕೇಳದಾದಾಗ ಕಸಬರಿಗೆ ದರ್ಶನಗಳೂ ಆಗಿರೋದು ಇದೆ. ಕಸಬರಿಗೆಯೊಂದೇ ನನ್ನಮ್ಮನ ಹತ್ತಿರವಿದ್ದ ಪರಮಾಣು ಸಮಾನ ಆಯುಧ. ಇಷ್ಟೆಲ್ಲಾ ಅಡೆತಡೆ ಗಳನ್ನೂ ನಿವಾರಿಸಿಕೊಂಡು ನನ್ನ ತಂಡವನ್ನು ಮುನ್ನಡೆಸುವುದು ನನಗೆ ಮಲ್ಲಿಗೆ ಹಾಸಿನ ಹಾಗೇನೂ ಸರಳವಾಗಿರಲಿಲ್ಲ. ಇಂತಹ ಸಂಧರ್ಭದಲ್ಲಿ ನಾನು ಸಚಿನ್ ತೆಂಡೂಲ್ಕರ್ ಆಗಬೇಕೆಂಬ ಆಸೆಗೆ ತಿಲಾಂಜಲಿ ಇಟ್ಟು, ತಂಡದ ಮ್ಯಾನೇಜರ್ ಹುದ್ದೆಗೆ ಬಡ್ತಿ ಹೊಂದಿದೆ. ಮ್ಯಾನೇಜರ್/ನಾಯಕನಾಗಿ ನಾನು ಆಟಗಾರರನ್ನು ಆಯ್ಕೆ ಮಾಡೋದು, ಪಂದ್ಯ ಆಯೋಜನೆ, ಬಾಜಿ ಕಟ್ಟೋದು, ಬ್ಯಾಟಿಂಗ್ ಬವಲಿಂಗ್ ಕ್ರಮಾಂಕ ಸಿದ್ಧಪಡಿಸೋದೆ ನನ್ನ ಮುಖ್ಯ ಕೆಲಸವಾಗಿ ಹೋಯಿತು. ನಾನು ಹೇಳಿದಂತೆ ನಡೆಯದಾದಾಗ ಕೆಲವು ಆಟಗಾರರನ್ನು ತಂಡದಿಂದ ಬರಖಾಸ್ತು ಮಾಡೋದು ನಡೆಯುತ್ತಿತ್ತು. ಇಷ್ಟೆಲ್ಲಾ ಆಯೋಜನೆ ಮಾಡಿ ಎಲ್ಲವೂ ಸರಿ ಹೋಗದೆ ಒಂಭತ್ತು ಆಟಗಾರರು ಔಟ್ ಆದಾಗ ನಾನು ಬ್ಯಾಟಿಂಗ್ ಗೆ ಇಳಿದು ಒಂದಂಕಿ ರನ್ ಗಳಿಸಿ ತೃಪ್ತಿ ಪಟ್ಟುಕೊಳ್ಳುತ್ತಿದ್ದೆ.
ಹೀಗೆ ಆಯಿತಲ್ಲ ಅನ್ಕೊಂಡು ನಾನು ಎಂದೂ ಕುಗ್ಗಲಿಲ್ಲ. ನನ್ನ ಈ ವಿ(ಕು) ಖ್ಯಾತಿಯನ್ನು ಪಸರಿಸುತ್ತಲೇ ಸಾಗಿದ್ದೆ. ನಮ್ಮ ತಂಡ ದೊಡ್ಡ ದಾಗುತ್ತಿಂದ್ದಂತೆ, ನಾವೂ ದೊಡ್ದವರಾಗುತ್ತಿದ್ದಂತೆ ನಮ್ಮ ಗಲ್ಲಿಯ ಮುಂದಿರುವ ದೊಡ್ಡ ಜಾಗೆಯಲ್ಲಿ ನಮ್ಮಕ್ರಿಕೆಟ್ ಮೈದಾನವನ್ನು ಸಿದ್ಧಪಡಿಸಿದೆವು. ದಿನಾಲೂ ಕ್ರಿಕೆಟ್ ಆಟ ಮುಗಿದ ಮೇಲೆ ಸಂಜೆ ೧-೨ ಘಂಟೆಯ ಹರಟೆ ನಮ್ಮ ಗೆಳೆಯ ಉಮೇಶನ ಅಂಗಡಿಯ ಮುಂದೆ!. ಆತನಿಗೋ ಬಾಯಿಬಿಟ್ಟು ಹೇಳುವ ಹಾಗೂ ಇಲ್ಲ ಸುಮ್ಮನೆ ಕೂರುವ ಹಾಗೂ ಇಲ್ಲ. ಬಾಯಿಬಿಟ್ಟು ಹೇಳಿದರೆ ಗೆಳೆಯರು ನೊಂದುಕೊಳ್ಳಬಹುದೆಂಬ ಧರ್ಮಸಂಕಟ , ಸುಮ್ಮನೆ ಇದ್ದರೆ ವಹಿವಾಟು ಕಮ್ಮಿಯಾಗುವುದೆಂಬ ಹೆದರಿಕೆ. ಆದರೆ ಈ ಯಾವ ವಿಷಯಗಳು ನಮ್ಮ ಹರಟೆಗೆ ಅಡ್ಡಿಯಾಗಲಿಲ್ಲ. ಕಟ್ಟೆಗೆ ಬರುತ್ತಲೇ ನಾನು, ಮುರ್ಗೆಶ್, ಸಂದೀಪ್ ಒಂದು ಗುಂಪಾಗಿ ಸಚಿನ್ ತೆಂಡೂಲ್ಕರ್ ಗುಣಗಾನ ಮಾಡಿದರೆ, ಹಾಗೆಯೇ ಮಿಕ್ಕವರಲ್ಲಿ ಒಂದಿಷ್ಟು ಜನ ಸಚಿನ್ ತೆಂಡೂಲ್ಕರ್ ಅವಹೇಳನ ಮಾಡುವದು, ಉಳಿದವರು ಸ್ವತಂತ್ರ ಅಭ್ಯರ್ಥಿಗಳ ಹಾಗೆ ಇಬ್ಬರನ್ನೂ ಓಲೈಸುವ ಮಾತುಗಳು ಶುರುವಾಗಿರುತ್ತಿದ್ದವು. ನಮ್ಮ ವಾದ ಏನೆಂದರೆ ಸಚಿನ್ ನನ್ನು ಮೀರಿಸುವವರಿಲ್ಲ, ಆತನ ಆಟದ ವೈಶಿಶ್ಯ್ತ, ಆತನ ಗೆಲುವಿನ ಇನಿಂಗ್ಸ್ ಗಳು ಎಲ್ಲರಿಗೂ ಪ್ರೇರಣೆ. ಆತ ದೇಶಪ್ರೇಮಿ, ತಂಡಕ್ಕಾಗಿ ಆಡುತ್ತಾನೆ ಇತ್ತ್ಯಾದಿ. ಮಿಕ್ಕವರ ವಾದ ಸಚಿನ್ ತನಗಾಗಿ ಆಡುತ್ತಾನೆ, ರೆಕಾರ್ಡ್ ಗಳಿಗಾಗಿ ಮಾತ್ರ ಆಡುತ್ತಾನೆ, ಇತ್ತ್ಯಾದಿ. ಮುರ್ಗೆಶ್, ಸಂದೀಪ್ ರ ಬೆಂಬಲ ಎಲ್ಲ ಸೇರಿ ಕಡೆಗೆ ನಮ್ಮ ವಾದಕ್ಕೆ ಜಯ ಸಂದುತ್ತಿತ್ತು.
ಆದರೆ ನಾನು ಬರಬರುತ್ತ ಪ್ರಬುದ್ಧನಾಗುತ್ತ ಹೋದೆ, ನನ್ನ ಹಿಟ್ಲರ್ ಗುಣಗಳು ನನ್ನ ೬ ನೆ ತರಗತಿಯಲ್ಲೇ ಮಾಯವಾದವು. ಅದ್ಯೆಷ್ಟೋ ಜನರ ಗೆಳೆತನವಾಯಿತು, ಗೆಳೆಯರಲ್ಲಿ ಬೆರೆತು ಎಲ್ಲರ ವಾದಗಳಿಗೂ ಅವಕಾಶ ಕೊಡಲಾರಂಭಿಸಿದೆ. ಆದರೆ ಸ್ವಪ್ರತಿಷ್ಠೆ, ಸ್ವಾಭಿಮಾನದ ವಿಷಯ ಬಂದಾಗ ಎಂದೂ ರಾಜಿಯಾಗಲಿಲ್ಲ. ಇದೇ ಗುಣ ನಾನು ೭ ನೇ ತರಗತಿಯಲ್ಲಿ ನನ್ನನ್ನು ಶಾಲೆಯ ಜಿ. ಎಸ್. ಸ್ಥಾನಕ್ಕೆ ತಂದು ಕೂರಿಸಿತು.
ನಾನು ನನ್ನ ಹಾಯ್ ಸ್ಕೂಲ್ ನಲ್ಲಿದ್ದಾಗಿನಿಂದ ನನ್ನ ಗೆಳೆಯರಿಗೆ ಒಳ್ಳೆಯ ಗೆಳೆಯನಾದೆ. ಶಾಲೆಯಲ್ಲಿ ಉತ್ತಮ ಅಂಕ ಪಡೆದು ಮನೆಯಲ್ಲಿ ಖುಷಿಯ ಸೆಲೆಯಾದೆ.
ಶಾಲೆಯಲ್ಲಿ ಉತ್ತಮ ವಿದ್ಯರ್ಥಿಯಾದೆ. ಗಲ್ಲಿಯಲ್ಲಿ ಕ್ರಿಕೆಟ್ ತಂಡಕ್ಕೆ ಉತ್ತಮ ಮ್ಯಾನೇಜರ್ ಆದೆ. ಆದರೆ ಸಚಿನ್ ತೆಂಡೂಲ್ಕರ್ ಆಗಬೇಕೆಂಬ ಆಸೆ ಆಸೆಯಾಗಿಯೇ ಉಳಿಯಿತು.
ಆತನ ಹಾಗೂ ನನ್ನ ಜೀವನದಲ್ಲಿ ಸ್ವಲ್ಪ ಸಾಮ್ಯತೆಗಳಿದ್ದವಾದರೂ ಸಚಿನ್ ಜಗತ್ವಿಖ್ಯಾತಿಯಾದ, ಆದರೆ ನಾನು ವಿಖ್ಯಾತವಾಗದಿದ್ದರೂ ಜನರು ನನ್ನ ಕುಖ್ಯಾತಿಯನ್ನು ಮರೆತು ನಾನು ಒಬ್ಬ ಒಳ್ಳೆಯ ಹುಡುಗನೆಂಬ ಪಟ್ಟಿಗೆ ಸೇರಿಸಿ, ನನಗೆ ಬಡ್ತಿ ಕೊಟ್ಟರು.
ಕೊನೆಗೆ ನನ್ನ ಕನಸು ಕನಸಾಗೇ ಉಳಿಯಿತು.
ನಿಮ್ಮ,
ಗುರುರಾಜ್
Awesome Guru !!
ಪ್ರತ್ಯುತ್ತರಅಳಿಸಿ"ನನ್ನ ಬಾಲ್ಯದ ದಿನಗಳಲ್ಲಿ ನಾನು ಒಂದು ಥರ ಪುಟ್ಟ ಹಿಟ್ಲರ್ ಹಾಗೆ ಇದ್ದೆ. ಸಿಟ್ಟು ಯಾವಾಗಲೂ ನನ್ನ ಮೂಗಿನ ನೇರಕ್ಕೆ, ನನ್ನ ಮಾತು ನಡೆಯಲೇಬೇಕು" is really true. Still i remember the way we use to fight at primary school and cant forget the days
when i use to get scolded while studying Maths at college days !! Ha HA HA HA
Really Muttu :) gone are the days which we always keep missing!
ಪ್ರತ್ಯುತ್ತರಅಳಿಸಿsoooper Guru...
ಪ್ರತ್ಯುತ್ತರಅಳಿಸಿinonderada karname (Baratang nalli police daali, esacape agiddu navibra.. ha ha ha) iddu...na nenapa maadi kodabekagitta....
Thanks Murgesh :) adu nanna next blogsgalalli include madkotini :)
ಪ್ರತ್ಯುತ್ತರಅಳಿಸಿGuru ondanondu kaaladalli Hitler + 10deulkar :)
ಪ್ರತ್ಯುತ್ತರಅಳಿಸಿ