ಬುಧವಾರ, ಫೆಬ್ರವರಿ 9, 2011

ಬರವಣಿಗೆಯ ಪಯಣದಲಿ ನಾನೊಬ್ಬ ಹಸುಗೂಸು

ನಮ್ಮರಾಜಕೀಯ ನಾಯಕರು ಸುಳ್ಳು ಆಶ್ವಾಸನೆ ಕೊಡೋಕೆ ತಯ್ಯಾರಿ ಮಾಡ್ಕೊಳ್ತಾರಲ್ಲ, ಹಾಗೆ ನಾನೂ ಬ್ಲಾಗ್ ಬರೀಬೇಕು ಅಂತ ಎಷ್ಟೋ ದಿನದಿಂದ ತಯ್ಯಾರಿ ಮಾಡ್ಕೊಳ್ತಾ ಇದ್ದೆ . ಇವತ್ತು ನನ್ನ ಸ್ನೇಹಿತನ ಪ್ರಭಾವದಿಂದ ಆ ದಿನ ಕೂಡಿಬಂತು . 

ಮನುಷ್ಯ ದಿನಾಲೂ ಹೊಸ ಜನರ ಪರಿಚಯದಿಂದ ಮಾತನಾಡುವದನ್ನು, ನಾಗರಿಕತೆಯನ್ನು ಹೇಗೆ ಬೆಳೆಸಿಕೊಳ್ಳುತ್ತಾನೆಯೋ ಹಾಗೇ, ಬರವಣಿಗೆಯನ್ನು ಪ್ರಚಲಿತ ವಿದ್ಯಮಾನದ ಬಗ್ಗೆ, ಸಾಮಾಜಿಕ ಜೀವನದ ಬಗ್ಗೆ ಅವಲೋಕನ ಮಾಡಿ ಬರೆಯುವುದರಿಂದ ಬೆಳೆಸಿಕೊಳ್ಳುತ್ತಾನೆ. ನಾನು ಕನ್ನಡ ದ ಅನೇಕ ಪತ್ರಕರ್ತರ ಬ್ಲಾಗ್ ಗಳಲ್ಲಿ, ಅಂಕಣ ಗಳಲ್ಲಿ ನನ್ನ ಅನಿಸಿಕೆಗಳನ್ನು ಹೇಳಿಕೊಳ್ಳುವುದರ ಮೂಲಕ ಈ ಬರೆಯುವ ಹವ್ಯಾಸವನ್ನು ಬೆಳೆಸಿ ಕೊಳ್ಳುತ್ತಾ ಈ ಬರವಣಿಗೆಯ ವಿಶಾಲವಾದ ಲೋಕದಲ್ಲಿ ನನ್ನ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ (ನನ್ನ ಹೆಜ್ಜೆಯ ಅಳತೆ ೧೦ , ಹಾ ಹಾ ಹಾ! ) . 

ದಯವಿಟ್ಟು ತಪ್ಪನ್ನು ತಪ್ಪೆಂದು ತಿದ್ದಿ, ಸರಿಯಾದುದನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿ . 

ಇಂತಿ ನಿಮ್ಮ, 
ಗುರುರಾಜ್

10 ಕಾಮೆಂಟ್‌ಗಳು:

  1. ತುಂಬಾ ಒಳ್ಳೆಯ ಹೆಜ್ಜೆ ಗುರು, ಜಮಾಯಿಸು :-) ನಮ್ಮದು ಅನಿಸಿಕೆ ಮೂಲಕ ಬರವಣಿಗೆ ಬೆಳವಣಿಗೆ!

    ಪ್ರತ್ಯುತ್ತರಅಳಿಸಿ
  2. the next philosophers form Bijapur Best whishes / dear keep it up/ Best regards from my side ---- if u need publishers dont forget me.....

    ಪ್ರತ್ಯುತ್ತರಅಳಿಸಿ