ಶನಿವಾರ, ಫೆಬ್ರವರಿ 12, 2011

ಭಾರತೀಯ ಪತ್ರಿಕೋದ್ಯಮದ ಮೇಲೆ ಭ್ರಷ್ಟಾಚಾರದ ಕಾರ್ಮೋಡ

ಭಾರತ ಒಂದು ವಿಶಾಲವಾದ ರಾಷ್ಟ್ರ. ಅಲ್ಲಿ ಎಲ್ಲ ವರ್ಗದ ಜನರು ಸಿಗುತ್ತಾರೆ. ಬಡವ, ಸಿರಿವಂತ, ಮಧ್ಯಮ, ಪರಾವಲಂಬಿ, ಸ್ವಾವಲಂಬಿ, ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.
ಹಾಗೆಯೇ ಭಾರತದಲ್ಲಿ ಜನಸಂಖ್ಯೆ ಒಂದು ದೊಡ್ಡ ಸಮಸ್ಯೆ.


ಈ ಜನಸಂಖ್ಯೆಯ ಮಧ್ಯೆ ಎಲ್ಲ ವರ್ಗದವರನ್ನು ಸಂತುಷ್ಟಪದಿಸುವುದು, ಅಥವಾ ಅಭಿವ್ರುಧ್ಹಿ ಪಡಿಸುವುದು ಅಷ್ಟು ಸುಲಭ ಸಾಧ್ಯವಾದ ಮಾತಲ್ಲ.
ಆಗ ರಾಜಕಾರಣಿಗಳಿಗೆ ಹೊಳೆದದ್ದೇ ಜಾತಿ ಹಾಗೂ ಧರ್ಮ ರಾಜಕಾರಣ. ಜನರಿಗೆ ಇಪ್ಪತ್ತೊಂದನೆ ಶತಮಾನದಲ್ಲೂ ಜಾತಿ ಹಾಗೂ ಧರ್ಮವೇ ಅಧಿಕಾರಕ್ಕೆ ಮಾನದಂಡವಾಯಿತು.


ಇದನ್ನರಿತ ನಮ್ಮ ರಾಜಕೀಯ ನಾ(ಲಾ)ಯಕರು ಜಾತಿ ಹಾಗೂ ಧರ್ಮವನ್ನೆ ತಮ್ಮ ಅಸ್ತ್ರವನ್ನಾಗಿ ರೂಪಿಸಿಕೊಂಡು ಅಧಿಕಾರಕ್ಕೆ ಅಂಟಿ ಹೋದರು.
ರಾಜಕಾರಣಿಗಳು ಭಗವದ್ಗೀತೆ ಹಾಗೂ ಖುರಾನ್ ನ ಮೂಲ ಸಾರಾಂಶ ವನ್ನೇ ಬದಿಗೊತ್ತಿ, ತಮ್ಮದೇ ಗುಪ್ತ ಪ್ರಣಾಳಿಕೆಯನ್ನು ಅಳವಡಿಸಿ ಬಿಟ್ಟವು.
ಅದಕ್ಕೆ ಒಂದು ಉತ್ತಮ ಉದಾಹರಣೆ ಇಂದಿನ 'ಜೆಹಾದ್'. ಹೀಗೆ ಭಾರತದಲ್ಲಿ ಈ ಎರಡು ಧರ್ಮಗಳು ರಾಜಕೀಯ ದೊಂಬರಾಟಕ್ಕೆ ಸಿಲುಕಿ ತಮ್ಮತನವನ್ನೇ ಮರೆತು ಬಿಟ್ಟಿವೆ.

ಇಂತಹ ಪರಿಸ್ಥಿತಿಯಲ್ಲಿ ಧರ್ಮ ಕದನದಿಂದ ನಿರಾಶ್ರಿತರಾದವರಿಗೆ ಭಾರತೀಯರ ಸಾಮರಸ್ಯಕ್ಕೆ, ಭ್ರಾತೃತ್ವಕ್ಕೆ ಒಂದು ದಾರಿದೀಪವಾಗಿದ್ದೆ ಭಾರತೀಯ ಪತ್ರಿಕೋದ್ಯಮ.
ಈ ಪತ್ರಿಕಾ ಸ್ವಾತಂತ್ರ್ಯವನ್ನೇ ಅಸ್ತ್ರವಾಗಿಟ್ಟುಕೊಂಡು ಅಸಹಾಯಕರ ಧ್ವನಿಯಾಗಿ ಪತ್ರಿಕೋದ್ಯಮ ಹೊರಹೊಮ್ಮಿತು.

ಇಂದಿರಾ ಗಾಂಧಿಯ ಕಾಲದ ತುರ್ತು ಪರಿಸ್ಥಿತಿಯನ್ನು ಮೆಟ್ಟಿ ನಿಂತು ಏಕಾಧಿಪತ್ಯ ಸರ್ವಾಧಿಕಾರಿ ಸರಕಾರವನ್ನೇ ಬೀಳಿಸಿ ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗಿದ್ದೇ ಭಾರತದ ಪತ್ರಿಕೋದ್ಯಮ.
ಕಾಶ್ಮೀರದಲ್ಲಿ ನಡೆಯುತ್ತಿದ್ದ ಭಯೋತ್ಪಾದಕರ ಅಟ್ಟಹಾಸ ವನ್ನು ಸವಿವರವಾಗಿ ಪ್ರಕಟಿಸಿ ವಿಶ್ವಸಂಸ್ಥೆಯ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೆ ಭಾರತದ ಪತ್ರಿಕೋದ್ಯಮ.
ಬಿಹಾರದಲ್ಲಿ ಲಾಲೂ ಯಾದವ್ ನೆಂಬ ಅವಿವೇಕಿಯ ಅಧಿಪತ್ಯ ಕ್ಕೆ ಅಂತ್ಯ ಹಾಡಿದ್ದೆ ಭಾರತದ ಪತ್ರಿಕೋದ್ಯಮ. ಪಶ್ಚಿಮ ಬಂಗಾಳದಲ್ಲಿ ೩೦ ವರ್ಷದ ಕಾಮ್ಮುನಿಸ್ಟ್ ರ ಬುಡ ಅಳುಗಾಡಿಸಿದ್ದೆ ಭಾರತದ ಪತ್ರಿಕೋದ್ಯಮ.
ಈ ಕೆಲಸದ ಹಿಂದೆ ಅದ್ಯಷ್ಟೋ ಅಸಂಖ್ಯ, ಅನುಭವಸ್ಥ, ನಿಸ್ವಾರ್ಥಿ, ದೇಶಪ್ರೇಮಿ ಪತ್ರಕರ್ತರ ಶ್ರಮವಿತ್ತು. ಅವರು ತಮ್ಮ ಜೀವಭಯವನ್ನು ತೊರೆದು ನಮ್ಮ ರಾಷ್ಟ್ರವನ್ನು ನಿಜವಾದ ಪ್ರಜಾಪ್ರಭುತ್ವ ರಾಷ್ಟ್ರವಾಗಿಸಲು ತಮ್ಮ ಜೀವ ಸವೆದರು.

ಮನುಷ್ಯನ ಜೀವನದಲ್ಲಿ ಆಸೆಗೆ ಮಿತಿಯಿಲ್ಲ. ಈ ಆಸೆಗೆ ಯಾವುದೇ ವರ್ಗಗಳು, ಧರ್ಮಗಳು, ಪಂಗಡಗಳು, ರಾಜಕಾರಣಿಗಳು, ಪತ್ರಕರ್ತರು ಎಂಬ ಬೇಧವಿಲ್ಲ. ಆದರೆ ಈ ಆಸೆ ದೊಡ್ಡದಾಗಿ 'ದು'ರಾಸೆ ಎಂಬುದು ಬೆಳೆದುಬಿಟ್ಟರೆ ದೇಶಕ್ಕೆ ಗಂಡಾಂತರ ಕಟ್ಟಿಟ್ಟ ಬುತ್ತಿ.
ದುರಾಸೆಯ ಬೆನ್ನು ಹತ್ತಿ ಅದರ ಪರಿಣಾಮ ಹುಡುಕುತ್ತ ಹೋದರೆ ಸೆಪ್ಟೆಂಬರ್ ೧೧ ರ ಅಮೆರಿಕಾದ ಮೇಲಿನ ಆಕ್ರಮಣ, ಇರಾಕ್ ನಲ್ಲಿ ಸದ್ಧಾಂ ಹುಸೈನ್ ನ ಅಧಿಪತ್ತ್ಯ ಅವನ ಸಾವಿನಲ್ಲಿ ಅಂತ್ಯ, ಪಾಕಿಸ್ತಾನದಲ್ಲಿ ಪರ್ವೇಜ್ ಮುಷರ್ರಫ್ ನ ರಾಜಕೀಯ ಅಂತ್ಯ, ಬೋಫೋರ್ಸ್ ನಲ್ಲಿ ಪಾತ್ರವಿದ್ದ ಸೋನಿಯಾ ಗಾಂಧಿಯನ್ನು ಪ್ರಧಾನಿಯೆಂದು ಒಪ್ಪಿಕೊಳ್ಳಲು ತಿರಸ್ಕರಿಸಿದ ಭಾರತೀಯರು, ತೀರ ಇತ್ತೇಚೆಗೆ ಅಂದರೆ ಈಜಿಪ್ಟ್ ನಲ್ಲಿ ಹೋಸ್ನಿ ಮುಬಾರಕ್ ಎಂಬ ಸರ್ವಾಧಿಕಾರಿಯ ೩೦ ವರ್ಷದ ಘೋರ ರಾಜಕೀಯದ ಅಂತ್ಯ. ಇವುಗಳನ್ನೆಲ್ಲ ನೋಡಿದಾಗ ಅನಿಸುವುದು ದುರಾಸೆಗೆ ಅಂತ್ಯ ಖಂಡಿತ. ನೆನಪಿರಲಿ ಈ ಅಂತ್ಯಗಳಿಗೆಲ್ಲ ಮುಖ್ಯ ಪಾತ್ರವಹಿಸಿದ್ದೆ ಪತ್ರಿಕಾ ಸ್ವಾತಂತ್ರ್ಯ .

ವರ್ತಮಾನ ಭಾರತದಲ್ಲಿ ಈ ದುರಾಸೆಗೆ ಇನ್ನೊಂದು ಹೆಸರು ಭ್ರಷ್ಟಾಚಾರ ವೆಂಬುದು ಪ್ರತಿ ಪ್ರಜೆಗೂ ತಿಳಿದ ವಿಷಯ. ೨-ಜಿ ಸ್ಪೆಕ್ಟ್ರಂ, ದೆಹಲಿ ಕಾಮನ್ ವೆಲ್ತ್, ಇಸ್ರೋ ಎಸ್ಸ್-ಬ್ಯಾಂಡ್, ಆದರ್ಶ್ ಹೌಸಿಂಗ್, ಕರ್ನಾಟಕದ ಭೂ ಹಗರಣಗಳು ಭಾರತವನ್ನು ಅಭಿವೃದ್ಧಿ ಶೀಲ ಗೊಳಿಸುವ ಸ್ಪರ್ಧೆಯಲ್ಲಿ ಕೊಂಚ ಮಂಕಾಗಿಸಿದೆ. ಅದರ ವಿಶ್ವಸಂಷ್ಟೆಯ ಖಾಯಂ ಸದಸ್ಯತ್ವದ ಬೇಡಿಕೆ ಈಡೇರುವ ಸಮಯದಲ್ಲಿ ಕೊಂಚ ಮುಖಭಂಗವಾಗಿದೆ. ಭಾರತದ ಏಳಿಗೆ ಸಹಿಸದ ರಾಷ್ಟ್ರಗಳಿಗೆ ಮನದಲ್ಲೇ 'ಜಿಲೇಬಿ' ತಿಂದಷ್ಟು ಖುಷಿಯಾಗಿದೆ.
ಈ ಹಗರಣಗಳೆಲ್ಲವನ್ನು ಬಯಲಿಗೆಳೆದು ಜನರ ಪ್ರಶಂಸೆಗೆ ಪಾತ್ರವಾಗಿದ್ದ ಭಾರತದ ಪತ್ರಿಕೋದ್ಯಮಕ್ಕೆ ಧುತ್ತೆಂದು ಆಶ್ಚರ್ಯ ಕಾದಿತ್ತು. ಅದೇನೆಂದರೆ ಈ ಹಗರಣಗಳಲ್ಲಿ ಭಾರದತ ಘಟಾನುಘಟಿ ಪತ್ರಕರ್ತರ ಪಾತ್ರವು ಇದ್ದದ್ದು.
ಈ ಹಗರಣಗಳಲ್ಲಿ ಪ್ರಮುಖವಾಗಿ ಕೇಳಿ ಬಂದ ಪತ್ರಕರ್ತರ ಹೆಸರುಗಳು ಬರ್ಖಾ ದತ್ತ್, ವೀರ್ ಸಿಂಗ್ವಿ, ಹಾಗೂ ಮುಂತಾದ ಖ್ಯಾತಿವೆತ್ತ ರಾಷ್ಟ್ರೀಯ ಪತ್ರಕರ್ತರು.

ಈ ವಿಷಯದಲ್ಲಿ ಪ್ರಾದೇಶಿಕ ಪತ್ರಕರ್ತರೇನು ಸಾಚಗಲೆಂದು ಮೊಹರು ಒತ್ತುವ ಹಾಗಿಲ್ಲ. ಅಲ್ಲೂ ಬ್ರಷ್ಟತನ ತಾಂಡವವಾಡಿದೆ.
ಕರ್ನಾಟಕದ ಗಣಿ ಹಗರಣ ಗಳಲ್ಲಿ (ಕು)ಖ್ಯಾತಿವೆತ್ತ ಮಹಾನೀಯರುಗಳೂ ಪತ್ರಿಕೋದ್ಯಮವನ್ನು ತಮ್ಮ ರಾಜಕೀಯ ಅಸ್ತ್ರವಾಗಿಸಲು ತಮ್ಮದೇ ದೂರದರ್ಶನ ವಾಹಿನಿ, ಪತ್ರಿಕೆಗಳನ್ನು ತರಲು ತಯಾರಿ ನಡೆಸಿರುವಾಗಲೇ ಅಂತಹ ಬ್ರಷ್ಟರಿಗೆ ಹೆಗಲು ಕೊಡಲು ಕರ್ನಾಟಕದ ಪರ್ತಕರ್ತರೂ ಪ್ರಯತ್ತ್ನಿಸಿದ್ದಾರೆ. ಅದರಲ್ಲಿ ಪ್ರಮುಖ ಹೆಸರು ಕೇಳಿ ಬಂದದ್ದು ರವಿ ಬೆಳೆಗೆರೆಯಂಥವರದ್ದೂ. ಇದನ್ನೆಲ್ಲಾ ನೋಡಿದ್ದಾಗ ಎಲ್ಲರಿಗೂ ಅನ್ನಿಸುವುದು, ಬ್ರಷ್ಟಾಚಾರವೆಂಬ ಪಿಡುಗು ಒಂದು ಉದ್ದ್ಯಮಕ್ಕೆ ಮಾತ್ರ ಸೀಮಿತ ಎನ್ನುವುದು ಶುದ್ಧ ಮೂರ್ಖತನಕ್ಕೆ ನಿದರ್ಶನವಾಗುತ್ತದೆ . ಇದರ ಅರ್ಥ ಪೂರ್ತಿ ಪತ್ರಿಕೋದ್ಯಮವೇ ಬ್ರಷ್ಟತೆಗೆ ಬಲಿಯಾಗಿದೆಯಂತಲ್ಲ. ಅಲ್ಲಿ ಇವತ್ತಿಗೂ ಒಳ್ಳೆಯ, ಪ್ರಜ್ಞ್ಯಾವಂತ, ದೇಶಪ್ರೇಮಿ ಪತ್ರಕರ್ತರೂ ಇದ್ದಾರೆ. ಅಂಥವರು ಇದ್ದಲ್ಲೇ ಈ ಎಲ್ಲ ಹಗರಣಗಳು ಬಯಲಿಗೆ ಬರಲು ಸಹಕಾರಿಯಾಗಿದೆ.

ಭಾರತವನ್ನು ಈ ಬ್ರಷ್ಟಾಚಾರವೆಂಬ ಪಿಡುಗಿನಿಂದ ರಕ್ಷಿಸಬೇಕಾದರೆ ನಮ್ಮ ಪತ್ರಿಕೋದ್ಯಮ ಶುಚಿಗೊಳ್ಳಬೇಕು. ಇಲ್ಲಿರುವ ಕ್ರಿಮಿಗಳನ್ನು ಮೊದಲು ಹೊಡೆದು ಓಡಿಸಬೇಕು. ಇದರಲ್ಲಿ ನಾಗರಿಕರ ಪಾತ್ರವೂ ಅಷ್ಟೇ ಮುಖ್ಯವಾಗುತ್ತದೆ.


ಆಗಲೇ ಬಾಪೂಜಿ ಕಂಡ ರಾಮರಾಜ್ಯದ ಕನಸು ಸಾಕಾರಗೊಳ್ಳುತ್ತದೆ.

ನಿಮ್ಮ,
ಗುರುರಾಜ್

8 ಕಾಮೆಂಟ್‌ಗಳು:

  1. Nice article. I am really proud to know that you have this talent. Keep going!!!

    Regards
    Pallavi

    ಪ್ರತ್ಯುತ್ತರಅಳಿಸಿ
  2. Good one guru, will get some time and add valuable comments, for now it's very good and thoughtful!

    ಪ್ರತ್ಯುತ್ತರಅಳಿಸಿ
  3. Gud one Guru... Language is super kanreee...
    Full too proffesional...All the best ..keep it Up..

    Anand Gobbur

    ಪ್ರತ್ಯುತ್ತರಅಳಿಸಿ
  4. simply superb...super command over the language.
    Guru..as u know I am interested in sports and a fun loving guy...

    So, Please Ink something on this.

    ಪ್ರತ್ಯುತ್ತರಅಳಿಸಿ
  5. ಅತ್ಯ್ತುತಮವಾದ ಲಿಖಿತ ಗುರು. ನನಗೆ ತುಂಬಾ ಇಷ್ಟ ಆಯಿತು.
    ಹೀಗೆ ಕನ್ನಡದಲ್ಲೇ ಬ್ಲಾಗ್ಸ್ ಬರೆಯುತ್ತ ಇರು.

    ಇಂತಿ ನಿಮ್ಮ
    ಪ್ರದೀಪ್ ಬಡಿಗೇರ್

    ಪ್ರತ್ಯುತ್ತರಅಳಿಸಿ